MAIN PAGE

Currently You are in a sub page . Please visit the MAIN PAGE to see more details

Saturday, December 11, 2010

ಸ್ಪೂರ್ತಿಸೆಲೆ

ಇದು ಕಂಡಿತ ನನ್ನ ಬರಹಗಳಲ್ಲ . ನನ್ನ ನೆಚ್ಚಿನ ವಿಶ್ವೇಶ್ವರ ಭಟ್ ರವರ ಬರವಣಿಗೆಗಳ ಸಂಕಲನ.
ಮುಂಚೆಯೇ ಓದಿದ್ದರೆ ಮತ್ತೊಮ್ಮೆ ಓದಿ, ಇಲ್ಲದಿದ್ದರೆ ಈಗ ಓದಲು ಶುರು ಮಾಡಿ.

೧. ತಮ್ಮ ಟೈಮ್ ಟೇಬಲ್ ನಲ್ಲಿ ನಿಮಗಾಗಿ ಟೈಮ್ ಕೊಡುವವರನ್ನು ಪ್ರೀತಿಸಿ.
ನಿಮಗೆ ಟೈಮ್ ಕೊಡಬೇಕಾದ ಸಂದರ್ಭದಲ್ಲಿ ಟೈಮ್ ಟೇಬಲ್ ನೋಡುವವರನ್ನು ದೂರವಿಡಿ.

೨. ಸಂತಸ , ಸಮಾಧಾನ ವೆಂಬುದನ್ನು ಎಲ್ಲೂ ಸಿಗುವಂಥದಲ್ಲ.
ಅವೆರಡನ್ನು ನೀವೇ ಸೃಷ್ಟಿಸಿಕೊಳ್ಳಬೇಕು. ಆಗ ನೀವೇ ಪರಮಸುಖಿಯಗಿರುತ್ತಿರಿ.

೩.ಸದಾ ನನಗೆ ಬಿಡುವಿಲ್ಲ ಅಂದ್ರೆ ನಿಮಗೆ ಬಿಡುವಿನ ವೇಳೆಯೇ ಬರುವುದಿಲ್ಲ.
ಪ್ರತಿಯೊಂದು ನಾಳೆ ಮಾಡುತ್ತೇನೆ ಅಂದ್ರೆ ನಿಮ್ಮ ನಾಳೆ ಬರುವುದೇ ಇಲ್ಲ.

೪.ಜೀವನದಲ್ಲಿ ಸುಂದರವಾಗಿರುವವರನ್ನು ಪ್ರಿತಿಸುವುದಕ್ಕಿಂತ ,ಜೀವನವನ್ನು ಸುಂದರ ವಾಗಿಸುವವರನ್ನು ಪ್ರೀತಿಸಿ.

೫.ಸಂತಸದಲ್ಲಿದ್ದಾಗ ಭರವಸೆ ಕೊಡಬೇಡಿ.
ಬೇಸರದಲ್ಲಿದ್ದಾಗ ಉತ್ತರಿಸಬೇಡಿ,ಸಿಟ್ಟಿನಲ್ಲಿದ್ದಾಗ ನಿರ್ಧಾರ ತೆಗೆದುಕೊಳ್ಳಬೇಡಿ.

೬. ನೀವು ಏನೇ ಮಾಡಿ , ಮಾಡದೆ ಇರಿ.ನಿಮಗೆ ವಯಸ್ಸಾಗೋದು ಗ್ಯಾರಂಟಿ.
ಏನಾದರು ಮಾಡಿದರೆ ನಿಮ್ಮ ವಯಸ್ಸಿಗಾದರು ಮರ್ಯಾದೆ ಸಿಗುತ್ತದೆ,ನಿಮಗೆ ಸಿಕ್ಕಂತೆ.

೭.ಪ್ರೀತಿ ಎಂದರೆ ಯಾರೊಬ್ಬರನ್ನು ಗೆಲ್ಲುವುದಲ್ಲ.ಬೇರೆಯವರಿಗೆ ನೀವು ಸೋಲುವುದು.
ಈ ಸೋಲಿನಲ್ಲು ಗೆಲ್ಲುವವರೂ ನೀವೇ.

೮.ಯಾವುದಾದರು ನಿಯಮ ಇಷ್ಟವಾಗದಿದ್ದರೂ ಪಾಲಿಸಬೇಕು, ನಂತರ ನೀವೇ ಉನ್ನತಸ್ಥಾನಕ್ಕೆರಿ
ಆ ನಿಯಮವನ್ನೇ ಬದಲಾಯಿಸಬೇಕು.

೯.ಯಾವುದೇ ಕೆಲಸ ನಿಮ್ಮಿಂದ ಆಗೋಲ್ಲ ಅಂತ ಬೇರೆಯವರು ಹೇಳಿದರೆ ಅದು ಅವರ ಅನಿಸಿಕೆ.
ಅದನ್ನು ಸುಳ್ಳು ಮಾಡಿ ತೋರಿಸುವುದಷ್ಟೇ ನಿಮ್ಮ ಕೆಲಸ.ಇಲ್ಲದಿದ್ದರೆ ನೀವು ಅವರ ಅನಿಸಿಕೆಯನ್ನು ಒಪ್ಪಿಕೊಂಡತೆ ಆಯಿತು.

೧೦. ಬೇರೆಯವರು ನಿಮ್ಮನ್ನು ಅರ್ಥಮಾಡಿಕೊಳ್ಳದಿದ್ದರೆ ಚಿಂತಿಸಬೇಡಿ.
ನೀವು ನಿಮ್ಮನ್ನು ಅರ್ಥಮಾಡಿಕೊಳ್ಳದಿದ್ದರೆ ಚಿಂತಿಸಬೇಕು.

೧೧.ನಿಮಗೆ ಗೊತ್ತಿಲ್ಲದಿರುವುದನ್ನು ಹೇಳಬೇಡಿ. ಗೊತ್ತಿರುವುದೆಲ್ಲವನ್ನು ಹೇಳಬೇಡಿ.
ಹೇಳಬೇಕಾದುದಷ್ಟನ್ನೇ ಹೇಳಿ ಅದನ್ನು ನಿರ್ದರಿಸುವುದರಲ್ಲಿ ನಿಮ್ಮ ಜಾಣತನವಿದೆ.

೧೨. ಅದೆಷ್ಟೇ ದೂರ ಕ್ರಮಿಸಿರಲಿ,ಹೋಗುತ್ತಿರುವ ದಾರಿ ತಪ್ಪು ಎಂದು ಮನವರಿಕೆಯಾದರೆ
ತಕ್ಷಣ ವಾಪಸ್ ಬಂದುಬಿಡಿ.

೧೩.ಒಬ್ಬರನ್ನು ಇಷ್ಟಪಡಲು ಒಂದು ಕ್ಷಣ ಸಾಕು.ಪ್ರೀತಿಸಲು ಕೆಲ ಘಂಟೆಗಳು ಸಾಕು ಆದರೆ
ಒಬ್ಬರನ್ನು ಮರೆಯಲು ಜೀವಮಾನವೆ ಬೇಕು.ಆದ್ದರಿಂದ ಯಾರನ್ನು ಮರೆಯುವಂತ ಸಂದರ್ಭ ತಂದುಕೊಳ್ಳಬೇಡಿ.

೧೪.ನಮ್ಮಲ್ಲಿ ಒಬ್ಬರಂತೆ ಮತ್ತೊಬ್ಬರಿಲ್ಲ ,ಎಲ್ಲರು ಭಿನ್ನ ಆದರು ನಾವೆಲ್ಲಾ ಒಂದಾಗುವುದು ಸಾಧ್ಯವಿದೆ.

೧೫.ನೀವು ಒಬ್ಬರೇ ಇದ್ದಾಗ ನಿಮ್ಮ ಯೋಚನೆ ಬಗ್ಗೆ ಎಚ್ಚರವಿರಲಿ . ನೀವು ಗುಂಪಿನಲ್ಲಿದ್ದಾಗ ನಿಮ್ಮ ಮಾತಿನ
ಬಗ್ಗೆ ಎಚ್ಚರವಿರಲಿ .

೧೬. ನೀವು ಒಂದು ನಿಮಿಷ ಕೋಪದಿಂದ ಇದ್ದರೆ,60 ಸೆಕೆಂಡುಗಳ ಆನಂದ .ಸಂತಸವನ್ನು ಕಳೆದುಕೊಂಡಿರಿ
ಎಂದರ್ಥ . ಕೋಪ ಬಿಡಿ.

೧೭. ಜೋಗ ಜಲಪಾತದ ಮೇಲೆ ಹಗ್ಗದ ಮೇಲೆ ನಡೆಯುವುದು ನಿಜಕ್ಕೂ ಸಾಹಸ.ಹಾಗೆ ಮಾಡದಿರುವುದು ಬುದ್ದಿವಂತಿಕೆ.

೧೮.ಗೆಲುವು ಕೇವಲ ಒಂದು ದಿನದ ಆಟವಲ್ಲ ಅದು ನಿರಂತರ .ಇಂದು ಗೆದ್ದರೆ ಇಂದಿನ ಗೆಲುವು ಮಾತ್ರ.

೧೯.ಸಣ್ಣ ಕೋಪ ,ಪುಟ್ಟ ವೈ ಮನಸ್ಸು ,ಪೋಲಿ SMS ,ಪ್ರೀತಿಯ ಭಾವನೆ ,ಒಂದಷ್ಟು ಕಾಳಜಿ , ಸಹಾಯ,
ಕೆಲವು ಹಸಿಸುಳ್ಳು,ನೂರಾರು ಕ್ಷಮೆ ಸೇರಿದರೆ ಗೆಳತನ , ಸ್ನೇಹದಲ್ಲಿ ಇವೆಲ್ಲ ಸಾಮಾನ್ಯ.

೨೦. ಮಗು ನಿಮ್ಮ ಮಾತು ಕೇಳದಿದ್ದರೆ ಗಾಬರಿಯಾಗಬೇಡಿ.ಆದರೆ ಸದಾ ನಿಮ್ಮನ್ನೇ ನೋಡುತ್ತಿದ್ದರೆ ತಲೆಕೆಡಿಸಿಕೊಳ್ಳಿ.

೨೧.ನೀವು ಗೆಲ್ಲುವ ತನಕ ಆಟ ಮುಗಿದಿಲ್ಲ ಎಂದು ಭಾವಿಸಿ .ನೀವು ಎಂದು ಸೋಲುವುದೇ ಇಲ್ಲ .

೨೨. ಜೀವನವೆಂದರೆ ಅವಕಾಶಗಳ ನದಿಯಿದ್ದಂತೆ ,ನೀವು ಬಕೆಟ್ ಹಿಡಿದ್ದಿದ್ದಿರೋ ,ಚಮಚ ಹಿಡಿದ್ದಿದ್ದಿರೋ ಎಂಬುದು ಮುಖ್ಯ.
ಯಾವುದನ್ನು ಹಿಡಿಯಬೇಕೆಂದು ನಿರ್ಧರಿಸುವವರು ನೀವೇ.

೨೩.ಕಣ್ಣಿರು ನಗೆಗಿಂತ ಹೆಚ್ಚು ವಿಶೇಷ,ನಗೆಯನ್ನು ಯಾರಿಗಾದರೂ ಬೀರಬಹುದು ಆದರೆ ನಾವು ಪ್ರಿತಿಸಿದವರಿಗೆ ಮಾತ್ರ
ಕಣ್ಣಿರು ಮಿಡಿಯಬಹುದು.

೨೪.ಜೀವನದಲ್ಲಿ girlfriend / boyfriend ಕಳೆದುಕೊಳ್ಳುವುದು ದೊಡ್ಡ ದುರಂತ ಅಲ್ಲ,ಮತ್ತೊಬ್ಬರನ್ನು ಪಡೆಯಬಲ್ಲೆ
ಎಂಬ ಆತ್ಮವಿಶ್ವಾಸ ಕಳೆದುಕೊಳ್ಳುವುದೇ ದೊಡ್ಡ ದುರಂತ.

೨೫. 40 ದಿನ ಆಹಾರವಿಲ್ಲದೆ , 3 ದಿನ ನೀರಿಲ್ಲದೆ ,ಎಂಟು ನಿಮಿಷ ಗಾಳಿ ಇಲ್ಲದೆ ಬದುಕಬಹುದು, ಆದರೆ ಒಂದು ಕ್ಷಣ ಸಹ
ಆಸೆ ,ಭರವಸೆ ಇಲ್ಲದೆ ಬದುಕಲು ಸಾದ್ಯವಿಲ್ಲ.

---- ಸಂಗ್ರಹ : ಅನಿಲ್.

No comments: