MAIN PAGE
Friday, December 10, 2010
ಪ್ರೀತಿ ಒಂದು ರೀತಿ........
ಪ್ರೀತಿ ಒಂದು ರೀತಿ.......
.ಈ ಎರಡಕ್ಷರದ ಪ್ರೀತಿ ಎಲ್ಲರ ಬದುಕಿನಲ್ಲಿ ಬಂದಿರುತ್ತೆ……ಬಂದಿರಲೇಬೇಕು……ಪ್ರೀತಿಸುವ ತಾಯಿ, ತಂದೆ, ಅಣ್ಣ, ತಮ್ಮ………ಹೀಗೆ ಹತ್ತು ಹಲವು ಬಗೆ ಬಗೆಯ ಪ್ರೀತಿಯ ಸವಿಯನ್ನು ನಾವು ಉಂಡಿರುತ್ತೀವಿ…….ಹಾಗು ಬಡಿಸಿರುತ್ತೀವಿ…...... ಈ ಪ್ರೀತಿ ಅನ್ನೋದು ಒಂದು ಪುಳಕ……ಒಂದು ಬದುಕು….ಒಂದು ಯಶಸ್ಸು……ಅಂತ ನಮಗೆ ಅರಿವಾಗೋದೆ ನಾವು ಯವ್ವನದಲ್ಲಿ ಪ್ರೀತಿಸೋ ಗೆಳೆಯ/ಗೆಳತಿಯರಿಂದ.......
ಆಗ ತಾನೆ ಚಿಗುರುತ್ತಿರುವ ಚೆಲುವು, ಕಣ್ಣು ಬಿಡುತ್ತಿರುವ ಕನಸು………ಮೈ ತುಂಬಿರುವ ಯವ್ವನದ ಹುರುಪು…..ಏನನ್ನೋ ಯಾರನ್ನೋ ಸಂಗಾತಿಯಾಗಿ ಬಯಸುತ್ತಿರುತ್ತೆ....ಮುದ್ದು ಮಾಡಲು ಒಂದು ಪೆದ್ದು ಮನಸ್ಸಿಗೆ ಹಂಟ್ ಮಾಡುತ್ತಿರುತ್ತೆ…….ಇಂತ ಈ ಹುಚ್ಚು ಪ್ರೀತಿ ಎಲ್ಲರ ಸಹಜವಾದ ಬಯಕೆ.......….
ಈ ಸಮಯದಲ್ಲಿ ನಿಮ್ಮ ಕಯ್ ಹಿಡಿಯುವ, ಕಣ್ಣಿಗೆ ಕಾಂತಿ ತರುವ, ಮನಸ್ಸಿಗೆ ಬೆಸುಗೆ ಹಾಕುವ, ಕನಸುಗಳಿಗೆ ನೀರೆರಿಯುವ, ಪೆದ್ದು ಮಾತಿಗೆ ಮುದ್ದು ನಗೆ ಬೀರುವ, ಸದ್ದು ಮಾಡದೆ ಕದ್ದು ಬಂದು ಗುದ್ದಿ ಹೇಳುವ ಗೆಳತಿ ನಿಮಗೆ ಬದುಕಿನಲ್ಲಿ ಹೊಸದೊಂದು ಬೆಳಕು ಚೆಲ್ಲುತ್ತಾಳೆ...……ಇಂತ ಪ್ರೀತಿಯನ್ನು ಬೆನ್ನು ಹತ್ತಿ ಹೋದವರು, ಸೇರಿದವರು ಬದುಕಿನ ಅತಿ ಅಮೂಲ್ಯವಾದ ಅನುಭವಗಳನ್ನರಿತು ಸವಾರಿ ಮಾಡಿರುತ್ತಾರೆ.......…..ಈ ಪ್ರೀತಿಯ ಅನುಭವಗಳನ್ನು ಅಕ್ಷರಗಳಿಂದ ಅರ್ಥ ಮಾಡಿಸುವುದು ಅಸಾಧ್ಯವೇ ಸರಿ……….
ಈ ಪ್ರೀತಿಯ ದಿನಗಳಲ್ಲೂ……..ಜಗಳವಾದಿದ್ದೆಷ್ಟೋ
ಸಂತೋಷದ ಗಳಿಗೆಗಳಲ್ಲು…..ಕಣ್ಣೀರ್ ಇಟ್ಟಿದ್ದೆಷ್ಟೋ
ಫೋನ್ ಬಿಲ್ ಗಳು ಗರಿಗೆದರಿದ್ದರು……ಮುಗಿಯದ ಕನಸುಗಳ ಭೇಟಿಗಲೆಷ್ಟೋ
ದಿನಗಳುರಿಳಿದರು ಮಾಸಿಹೋಗದ ಚೆಷ್ಟೇಗಲೆಷ್ಟೋ.....…
ಗೆಳತಿಯ ಕಣ್ಗಳಿಂದ ಅದೆಷ್ಟು ಬಗೆಯ ಭಾವನೆಗಳು ಹೊರಬಂದವೋ.......ಅಷ್ಟು ಇಷ್ಟ.......….
ನಿದ್ದೆಯಲ್ಲಿ ಕೋಪಿಸಿಕೊಂಡು ಉತ್ತರಿಸಿದ ಫೋನ್ ಕಾಲ್ಗಳಿಷ್ಟು....…….
ಮೊದಲ ಮುತ್ತು ಕೂಡ ಮಾಸಿ ಹೋಗದ ಹಾಗೆ ಪದೆ ಪದೆ ನಗೆ ಬೀರುವ ಆ ತುಟಿಗಳಿಷ್ಟ .....ಮೆತ್ತನೆಯ ಅಪ್ಪುಗೆ.….ತುಂಟ ನಗು....ಗಾಳಿಗು ಪೆಟ್ ಆಗದ ಹಾಗೆ ಬಿದ್ದ ಹೊಡೆತ ….ತನಗರಿಯದೆ ಕಯ್ ಸೇರಿದ ಬೆರಳುಗಳು......
ಮುಖದ ಭಾವನೆಗಳಿಗೆ background ಮ್ಯೂಸಿಕ್ ನಂತ earings ಗಳು ….
Morning morning good morning ಮೆಸೇಜ್ ಗಳು …..ಹೆಜ್ಜೆ ಹೆಜ್ಜೆಗೂ ಗೆಜ್ಜೆನಾದದ ಸದ್ದುಗಳು.….ಹೀಗೆ ಹತ್ತು ಹಲವು.….ಸ್ಪರ್ಶ ಆಕರ್ಷಣೆಗಳು....…..ಪ್ರತಿಯೊಂದು ಇಷ್ಟ......ಇಷ್ಟ ಇಷ್ಟ…….
ಈ ಇಷ್ಟವಾದ ಗೆಳತಿ.........ಒಡತಿಯಂತೆ ವಾದಿಸಿ ಪೀಡಿಸಿ, ಘಾಸಿಗೊಳಿಸಿ..........ಆಮೇಲೆ ಪೂಸಿ ಮಾಡಿ.........sorry ಕೇಳಿ........ಮನಸೊಳಗೆ ಸೇರಿ ಗೂಡು ಕಟ್ಟೋ ಆ ಪರಿ......ಮುಪ್ಪಾದರೂ ಸದಾ ಹೃದಯದಲ್ಲಿ ಹೆಪ್ಪುಗಟ್ಟಿರುತ್ತದೆ.....…..Meaningless ಮಾತುಗಳು ….ಸಿಂಪಲ್ ಸಿಟ್ಟುಗಳು…..waste ವಾಗ್ವಾಧಗಳು.....ಸಮಯದ ಮುಳ್ಳುಗಳಿಗೂ ಮೀರಿದ ವೇಗದಲ್ಲಿ ದಿನಗಳನುರುಳಿಸುತ್ತದೆ…….ಹೀಗೆ ಪ್ರತಿ ದಿನ..….ಪ್ರತಿ ಕ್ಷಣ ಗೆಳತಿಯೊಂದಿಗಿನ, ಆಕೆಯ ನೆನಪಿನೊಂದಿಗಿನ ಸ್ಪರ್ಶ....…ಮತ್ತೆ ಮತ್ತೆ ಲೈಫ್ ನಲ್ಲಿ replay ಇರಬಾರದಿತ್ತೆ ……ಈ ಸಂಜೆ ಇನ್ನು ಕೆಲವು ನಿಮಿಷ ತಡೆಯಬಾರದಿತ್ತೆ……..ಆ ಮಳೆ ಇನ್ನು ಕೊಂಚ ಬರಬಾರದಿತ್ತೆ...……..ಈ ದಾರಿ ಇನ್ನು ಸ್ವಲ್ಪ ದೂರ ಸಾಗಬಾರದಿತ್ತೆ.......ಅನ್ನುವ ನಿಲುಕದ ನಿಲುವುಗಳಿಗೆ ಕಯ್ ಒಡ್ಡಿಸುತ್ತದೆ...……
You believe it or not, ನಿಮಗೆ ನೀವು ಯಾರು ಅಂತ ಅರಿವು ಮಾಡಿಸುತ್ತೆ ಈ ಪ್ರೀತಿ.....…..ನಿಮ್ಮಲ್ಲೂ ಒಂದು ego ಅಡಗಿದೆ, ನಿಮ್ಮಲ್ಲೂ ಒಂದು ಸಂಕೋಚವಿದೆ..…ನೀವು ಹೃದಯ ಬಿಚ್ಚಿ ನಗಬಲ್ಲಿರಿ, ನೀವು ಮನಸ್ಸು ಬಿಚ್ಚಿ ಅಳಬಲ್ಲಿರಿ..….ಕನಸುಗಳನ್ನು ಕಾಣಬಲ್ಲಿರಿ…….ನೆನಪುಗಳನ್ನು ಕೂಡಿರಬಲ್ಲಿರಿ ……..ಅನ್ನೋದನ್ನು prove ಮಾಡುತ್ತೆ…….ಈ idiot ಪ್ರೀತಿ.....……
There is so much to write…..ಆದ್ರೆ ...….ಆ ಭಾವನೆಗಳು..……..ಕನಸುಗಳು....…..ಆ ಸ್ವಚ್ಚಂಧವಾದ ನಿಲುವುಗಳು.……ಆಕಾಂಕ್ಷೆಗಳು..……..ಪ್ರೀತಿಯ ಗಳಿಗೆಗಳು....……ಕಾದ ದಿನಗಳು.....ಜಗಳವಾಡಿ ಮಾತು ಬಿಟ್ಟ ರೋಮಾಂಚಕ ಕ್ಷಣಗಳು....…….ಆ ಸ್ಪರ್ಶ..……ಆ ಮೆಲ್ಲನೆ ಉಸಿರು..….ಓಲೆಗಳ ಸದ್ದು.…..ತುಂಟ ನಗು…….ಇವುಗಳನ್ನು ಅಕ್ಷರಗಳಲ್ಲಿ ಕೂಡಿಡಬಹುದೇ ಹೊರತು ಅರ್ಥ ಮಾಡಿಸಲಾಗುವುದಿಲ್ಲ ಕಣ್ರೀ……….
ಇಂಥ ಒಂದು ರೀತಿಯ ಅನುಭವ ನಿಮ್ಮ ಬದುಕಿನಲ್ಲಿ ಬಂದದ್ದೇ ಆದ್ರೆ..….ನೀವು ಅದನ್ನು ಅನುಭವಿಸಿದ್ದೇ ಆದ್ರೆ…….you have earned the life’s most beautiful feelings………..ಈ ಪ್ರೀತಿ……..ಒಂದು ರೀತಿ ಫೀಲಿಂಗ್ ರೀ…….
Roshan OK
Subscribe to:
Post Comments (Atom)
2 comments:
Really good one roshan.... once you had these feelings then only you can feel this article.
" Experience cannot be explained ".
The best part i liked is "ನೀವು ಅದನ್ನು ಅನುಭವಿಸಿದ್ದೇ ಆದ್ರೆ…….you have earned the life’s most beautiful feelings "
Hope and pray, these beautiful feelings will remain beautifull for all the people across the Globe.
hey.. these words reminds me 'pancharangi' movie and 'Life istene' song.... :)
ಭಾವನೆಗಳು
ಕನಸುಗಳು
ಸ್ವಚ್ಚಂಧವಾದ ನಿಲುವುಗಳು
ಪ್ರೀತಿಯ ಗಳಿಗೆಗಳು
ಕಾದ ದಿನಗಳು
ರೋಮಾಂಚಕ ಕ್ಷಣಗಳು
good morning ಮೆಸೇಜ್ ಗಳು
Meaningless ಮಾತುಗಳು
ಸಿಂಪಲ್ ಸಿಟ್ಟುಗಳು
waste ವಾಗ್ವಾಧಗಳು
ಸ್ಪರ್ಶ ಆಕರ್ಷಣೆಗಳು
ಹೆಜ್ಜೆ ಹೆಜ್ಜೆಗೂ ಗೆಜ್ಜೆನಾದದ ಸದ್ದುಗಳು
background ಮ್ಯೂಸಿಕ್ ನಂತ earings ಗಳು
......
......
Simple wordsgalu,
with lot of feelingsgalu,
marayalaagadha memoriesgalu,
Life istene...
Rgds,
pk
Post a Comment