
ಒಬ್ಬ ವ್ಯಕ್ತಿಯ ಆಸೆ ಕನಸುಗಳನ್ನು ಮುಗಿಸುವ ತಾಕತ್ತು ಒಂದು ಪ್ರೀತಿಗೆ, ಒಂದು ಹುಡುಗಿಗೆ,ಒಂದು ಸಮಾಜಕ್ಕೆ,ಒಂದು ಸರ್ಕಾರಕ್ಕೆ,ಒಂದು ಅವಮಾನಕ್ಕೆ,ಒಂದು ಸೋಲಿಗೆ .ಒಂದು ಅಂಗವಿಕಲತೆಗೆ,ಒಂದು ಬಡತನಕ್ಕೆ ಯಾವುದಕ್ಕೂ ಇಲ್ಲ .ಸಾವನ್ನು ಹೊರತಾಗಿ ಬದುಕಿನ ಆಸೆ ಕನಸುಗಳನ್ನು ಮುಗಿಸುವ ತಾಕತ್ತು ಯಾವುದಕ್ಕೂ ಇಲ್ಲ,ಯಾರಿಗೂ ಇಲ್ಲ ಅದು ಬಂದಾಗ ಅಷ್ಟೇ ಆತ್ಮೀಯವಾಗಿ ಒಪ್ಪಿಕೊಳ್ಳಬೇಕು ಅಂತ್ಯವಿಲ್ಲದ್ದು ಯಾವುದು ಇಲ್ಲ ಸಾವಿನಷ್ಟು ಪರಿಪೂರ್ಣವಾದದ್ದು ಈ
ಜಗತ್ತಿನಲ್ಲಿ ಯಾವುದು ಇಲ್ಲ.
ಗಾಂಧೀಜಿ ಅಸ್ಥಂಗತರಾಗಿ ದಶಕಗಲೆ ಗತಿಸಿವೆ, ರಾಜ್ ಕುಮಾರ್ ರವರನ್ನು ಕಳೆದುಕೊಂಡು ವರ್ಷಗಳೇ ಗತಿಸಿದವು,ಇತ್ತೀಚೆಗೆ ಜ್ಯೋತಿ ಬಸು , ವಿಷ್ಣುವರ್ಧನ್ ಹಾಗೂ ಇಬ್ಬರು ಅಶ್ವಥ್ರಾನ್ನು ಕಳೆದುಕೊಂಡೆವು ಅವರವರಾರು ಕೆಲಸಗಳು ಮುಗಿದವು ಅವರು ಹೊರಟರು(ಕೆಲಸ ಮುಗಿಯದಿದ್ದರು ಹೋಗಲೇಬೇಕು).ಅವರ ಸಾಧನೆಗಳನ್ನು ಕೊಂಡಾಡಿದರು ಪೇಪರ್ ನಲ್ಲಿ ಪುಟಗಟ್ಟಲೆ ,ದೂರದರ್ಶನದಲ್ಲಿ ದಿನಪೊರ್ತ ಅವರ ಸಾಧನೆಗಳು ,ನಡೆದು ಬಂದ ಹಾದಿ,ಅನುಭವಿಸಿದ ಯಾತಣೆಗಳ ದರ್ಶನವಾಯ್ತು,ಯಾರೇ ಆಗಲಿ ಕಲಾವಿದ,ವಿಜ್ಞಾನಿ,ರಾಜಕಾರಣಿ,ಸಮಾಜವಾದಿ,ಯಾವೋನೆ ಆದರ್ಶ ವ್ಯಕ್ತಿ ಸತ್ತರು ಅವರ ಶತ್ರುಗಳು ಕೂಡ ಅವರನ್ನು ಮೆಚ್ಚಿ ಮಾತನಾಡುತ್ತಾರೆ ಅವರಂತೆ ನಡೆಯಬೇಕು,ಒಂದು ಚೇತನ / ಮಾರ್ಗದರ್ಶಕ ಎಲ್ಲವಾಗಿದೆ ಎಂಬಂತಾ ಮಾತುಗಳು ಹರಿದಾಡುತ್ತವೆ ಮತ್ತು ಅದು ಸಹಜ ಕೂಡ .ಆದರೆ ನಾನು ಹೇಳ ಹೊರಟಿರುವುದು ಅವರು ಬದುಕಿದ್ದಾಗ ನಾವು ಅವರಿಗೆ ತೋರಿಸಿದ ಗೌರವ ,ಅವರ ಆದರ್ಶಗಳ ಪಾಲನೆಗಳ ಬಗ್ಗೆ .ಬದುಕಿದ್ದಾಗ ಅವರ ಆಸ್ಪತ್ರೆಗಳ ಖರ್ಚಿಗೆ ಹಣವಿಲ್ಲದೇ ಒದ್ದಾಡಿ ಕಂಡ ಕಂಡಲ್ಲಿ ಸಾಲ ಮಾಡಿ ಅವರನ್ನು ಬದುಕಿಸೃತ್ತಾರೆ ,ಅವರ ಸಂಶೋಧನೆಗಳಿಗೆ ಬೆಲೆ ಕೊಡದೇ ಸತ್ತ ನಂತರ ಪಡುವ ಪಾಶಾಚತಾಪಕ್ಕೆ ಯಾವುದೇ ಅರ್ಥ ಇರುವುದಿಲ್ಲ ಆಗಬೇಕಾಗಿರುವುದೊಂದೇ ಅವರು ಬದುಕಿದ್ದಾಗ ಸಮಾಜಕ್ಕೆ ಅವರ ಕೊಡುಗೆ ಹಾಗೂ ಅವರ ಅವಶಯಕತೆಯನ್ನು ತಿಳಿಸಿದರೆ ಅವರ ಬಗ್ಗೆ ಎರಡು ಒಳ್ಳೇ ಮಾತುಗಳನ್ನಾಡಿದರೆ ಅದುವೇ ಅವರಿಗೆ ದೊರೆಯಬಹುದಾದ ಬಹು ದೊಡ್ಡ ಗೌರವ.
ಈಗ ಆಗಬೇಕಾಗಿರುವುದಿಷ್ಟೇ ನಮ್ಮ ಕರ್ನಾಟಕದಲ್ಲಿ ವಿವಿಧ ಕ್ಸೆತ್ರಗಳಲ್ಲಿ ಸೇವೆ ಸಲ್ಲಿಸಿದ ಬಹಳಷ್ಟು ಜನರಿದ್ದಾರೆ ಅವರಾರು ಇಂದು ಯಾರಿಗೂ ಕಾಣುತ್ತಿಲ್ಲ ಕಾಣುವುದು ಇಲ್ಲ, ಅವರ ಸಂಪೂರ್ಣ ಪರಿಚಯವಾಗುವುದು ಅವರು ನಮ್ಮನ್ನಗಲಿದಾಗಲೆ ಅದರ ಬದಲು ಈಗಲೇ ಆಯಾ ಕ್ಷೇತ್ರದ ಹಿರಿಯರನ್ನು ಗುರುತಿಸಿ ಅವರು ನಡೆದು ಬಂದ ಹಾದಿಯ ಬಗ್ಗೆ ಅವರು ಅನುಭವಿಸಿದ ಕಷ್ಟಗಳು,ಕಂಡುಕೊಂಡ ದಾರಿಗಳು ಅವರ ಮುುಲಕವೇ ತಿಳಿದುಕೊಂಡರೆ ಅದಕ್ಕಿಂತ ಮಹತ್ತರವಾದದ್ದು ಯಾವುದುಇರುವುದಿಲ್ಲ ಅವರ ಬಗ್ಗೆ ಯಾರ್ಯರಿಗೆ ಯಾವ ಯಾವ ಅಭಿಪ್ರಾಯಗಳಿರುತ್ತವೆಯೋ / ಭಿನ್ನಾಭಿಪ್ರಾಯಗಲಗಲಿ ಈಗಲೇ ವ್ಯಕ್ತವಾಗಬೇಕು ಅವರಿಗೆ ತಮ್ಮ ಬಗ್ಗೆ ಸಮಾಜಕ್ಕಿರುವ ಕಾಳಜಿ ತಿಳಿಯಬೇಕು.
ಸತ್ತ ನಂತರ ಅಮೃತ ಶಿಲೆಯಲ್ಲಿ ಕಟ್ಟುವ ಸಮಾಧಿಗಿಂತ ಬದುಕಿದ್ದಾಗ ಕಟ್ಟಿಕೊಡುವ ಹೆಂಚಿನ ಮನೆಯೇ ಲೇಸ
No comments:
Post a Comment