ಸ್ವಚ್ಚತೆ ಎಲ್ಲ ಮಾನವರಲ್ಲೂ ಇರಲೇಬೇಕಾದ ಬಹುಮುಕ್ಯ ಗುಣ ಲಕ್ಷಣ.
ನಮ್ಮ ಸಮಾಜದಲ್ಲಿ ಬಹಳ ಚಾಲ್ತಿಯಲ್ಲಿರುವ ಒಂದು ವಾಕ್ಯ
" ನಾನ್ ಒಬ್ಬ ಕಸ ಎಸುದ್ರೆ ಏನ್ ಆಗಲ್ಲ ಬಿಡು " . ಹೀಗೆ ನಾನ್ ಒಬ್ಬ ಅನ್ನೋದು ಮುಂದುವರಿದು ಇಡಿ ೧೧೦ ಕೋಟಿ ಜನರ ಮಾತಲ್ಲೂ ಬಂದ್ರೆ ನಮ್ಮ ಈ ಭಾರತ ವನ್ನ ಆ ದೇವರು ಬಂದ್ರು Clean ಮಾಡೋದು ಕಷ್ಟ ಇದೆ.
ಕಂಡ ಕಂಡಲೆಲ್ಲ ಕಸ ಬಿಸಾಡುವುದು ನಮ್ಮ ಜನ್ಮ ಸಿದ್ದ ಹಕ್ಕು ಎಂಬಂತೆ ನಮ್ಮ ಜನರು ವರ್ತಿಸುತಿದ್ದಾರೆ. ಇದಕ್ಕೆ ಬಹಳಷ್ಟು ಉದಾಹರಣೆಗಳು ಸಿಗುತ್ತವೆ.
ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವಾಗ ಬಸ್ ನ ಪ್ರಯಾಣಿಕರಿಂದ ಉಗುಳಿನ ಅಭಿಷೆಕವಾಗುವುದನ್ನು ನಾವು ನೋಡಿದ್ದೇವೆ.
lays,chocolate ಕವರ್ ಗಳು, paper ಗಳು ಬಸ್ ನಿಂದ ಹಾರಿ ಬರುವುದು ಸರ್ವೇ ಸಾಮಾನ್ಯ ಸಂಗತಿ.
ನಾವೆಲ್ಲಾ ಯಾಕೆ ಹೀಗೆ, ನಮ್ಮ ಮನೆಗಳನ್ನ ಹೇಗೆ ಸ್ವಚ್ಚವಾಗಿ ಇಡಬೇಕೆಂದು ಯೋಚಿಸುತ್ತೇವೆ,ಅದೇ ಯೋಚನೆ ಬೀದಿ,ರಸ್ತೆ,ಸಾರ್ವಜನಿಕ ಸ್ಥಳಗಲ್ಲಿ ನಮಗೆ ಬರುವುದಿಲ್ಲ/ಇರುವುದಿಲ್ಲ.
ಈ ವಿಷಯದಲ್ಲಿ ನಾವು ವಿದೇಶಿಯರಿಂದ ಕಲಿಯಬೇಕಾದದ್ದು ಬಹಳಷ್ಟು ಇದೆ.
ನನಗೆ ಈ ರೀತಿ ಬರೆಯಲು ಯೋಚನೆ ಮಾಡಲು ನಡೆದಂತ ಪುಟ್ಟ ಘಟನೆ ನಿಮ್ಮ ಮುಂದಿದೆ.
ನಾನು ಒಂದು ದಿನ ಮೈಸೂರ್ ಇಂದ Train ಅಲ್ಲಿ ಬೆಂಗಳೂರಿಗೆ ಬರುತಿದ್ದೆ. ಆಗ ನಂಗೆ ಫ್ರಾನ್ಸ್ ನ ಒಬ್ಬ ಯುವಕನ ಪರಿಚಯ ಆಯಿತು.
ಹಾಗೆ ಎರಡು ದೇಶದ ಭಾಷೆ/ಜನ ರ ವಿಷಯವಾಗಿ ವಿಚಾರ ವಿನಿಮಯ ನಡೆದಿತ್ತು. ಮಂಡ್ಯ ದಲ್ಲಿ ಇಬ್ಬರು ಕಾಫೀ ತೆಗೊದುಕೊಂಡು ಮತ್ತೆ ಟ್ರೈನ್ ಹತ್ತಿದೆವು. ನಾನು ಬಹು ಬೇಗ ಕಾಫೀ ಕುಡಿದು ಮುಗಿಸಿದೆ. ಅಲ್ಲೇ ಮದ್ಯೆ ಕಾಫೀ ಗ್ಲಾಸನ್ನು(Plastic/paper glass) ಎಸೆದೆ. ಮಾತುಕತೆ ಹಾಗೆ ಮುಂದುವರಿಯ್ತು, ನಾನು ಆ ಯುವಕನನ್ನು observe ಮಾಡ್ತಾ ಇದ್ದೆ, ಮದ್ದೂರು,ಚನ್ನಪಟ್ಟಣ,ರಾಮನಗರ,ಬಿಡದಿ ಎಲ್ಲಾ ಬಂದು ಹೋಯಿತು ಆದರು ಅವನ ಕಾಫೀ ಗ್ಲಾಸ್ ಮಾತ್ರ ಅವನ ಕೈಯಲ್ಲಿ ಬದ್ರವಾಗಿ ಉಳಿದಿತ್ತು.
ಕೊನೆಗೂ ಬೆಂಗಳೂರು ತಲುಪಿದೆವು, ಅವನ ಕಾಫೀ ಗ್ಲಾಸ್ ಗೆ ಮೋಕ್ಷ ಸಿಕ್ಕಿದ್ದು ಮಾತ್ರ ಮೆಜಸ್ಟಿಕ್ ನ DustBin ನಲ್ಲಿ.
ಅಂದೇ ಕೊನೆ ನಾನು ಎಲ್ಲಿಯೂ ಕಸ ಬಿಸಾಡುವುದಿಲ್ಲ. Plastic,chocolate ಕವರ್ ಕಂಡರೆ ತೆಗೆದುಕೊಂಡು ಕಸದ ಬುಟ್ಟಿಗೆ ಹಾಕುವ ಸಬ್ಯತೆಯನ್ನ ಬೆಳೆಸಿಕೊಂಡಿದ್ದೇನೆ.
ಈ ಪುಟ್ಟ ಘಟನೆ ಇಂದ ನಿಮ್ಮಲ್ಲೂ ಏನಾದರು ಬದಲಾವಣೆ ಆದರೆ ನಾನು ಧನ್ಯ.
ಇಂತಿ ನಿಮ್ಮ
ಅನಿಲ್
No comments:
Post a Comment